Wednesday, December 31, 2014

ಹುಡುಕಾಟ 

ಹೊಸತು ಹಳೆಯದಾಗಿ
ಹಳತು ಹೊಸತಾಗಿ

ನೆನ್ನೆ ನಾಳೆಯಾಗಿ
ನಾಳೆ ನೆನ್ನೆಯಾಗಿ

ಹಲವು ಒಂದಾಗಿ
ಒಂದು ಹಲವಾಗಿ

ನಾನು ನೀನಾಗಿ
ನೀನು ನಾನಾಗಿ

ಎಲ್ಲವೂ ಅವನಾಗಿ
ಅವನೇ ಎಲ್ಲವಾಗಿ

ಎಲ್ಲಿ ಕಾಣುವುದೋ
ಅಲ್ಲೇಕೆ ಹುಡುಕಾಟ?

--ಚಶಿನಾ